Advertisement
659items
ಯುವ ಸಂಗೀತ ದ್ವಯರಾದ ಗಣೇಶ ದೇಸಾಯಿ ಮತ್ತು ಪ್ರಕಾಶ್ ಹೆಗ್ಗಡೆಯವರು ಆಸ್ಟ್ರೇಲಿಯಾ ಪ್ರವಾಸ ಮಾಡುತ್ತಿದ್ದು ಎಲ್ಲ ಪ್ರಮುಖ ನಗರಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ. ಈ ಪ್ರತಿಭಾವಂತರು ಕಾರ್ಯಕ್ರಮ ನೀಡುವುದಲ್ಲದೇ ಸಂಗೀತ ಕಲಿಯಲಿಚ್ಛಿಸುವವರಿಗೆ ಹೇಳಿಕೊಡಲು ಸಿದ್ಧರಿದ್ದಾರೆ. 
ನಮ್ಮ ಕಾರ್ಯಕ್ರಮದ ವೀಣಾ ಸುದರ್ಶನ್ ಅವರು ಯುವ ಸಂಗೀತಗಾರರ ಸಿಡ್ನಿ ಭೇಟಿಯ ಸಮಯದಲ್ಲಿ ಅವರೊಡನೆ ಮಾತನಾಡಿ ಈ ವಿದ್ವಾಂಸರ ಸಂಗೀತ ಜೀವನದ ಯಾತ್ರೆ, ಸಾಧನೆ ಹಾಗೂ ಅವರ ಮುಂದಿನ ಗುರಿಗಳ ಬಗ್ಗೆ ತಿಳಿದುಕೊಂಡಿದ್ದಾರೆ...... ವಿವರಗಳಿಗೆ ಅಂಕಣ ಆಲಿಸಿರಿ .....
ಆಸ್ಟ್ರೇಲಿಯಾದಲ್ಲೇ ಹುಟ್ಟಿದ ಕೆಲಸಗಾರರಿಗಿಂತ, ಹೊಸದಾಗಿ ಆಗಮಿಸುವ ವಲಸಿಗರು ಉದ್ಯೋಗರಹಿತರಾಗುವುದು ಹೆಚ್ಚು ಸಾಧ್ಯತೆಯ ವಿಷಯ. ವೃತ್ತಿಜೀವನ ತರಪೇತುದಾರರು, ಹೊಸದಾಗಿ ಆಗಮಿಸಿದವರು ಎದುರಿಸುವ ಅತ್ಯಂತ ದೊಡ್ಡ ತಡೆ ಎಂದರೆ, ವಿದ್ಯಾರ್ಹತೆ ಇದ್ದರೂ, ಸಂದರ್ಶನ ಗಳಿಸುವಲ್ಲಿ ವಿಫಲರಾಗುವುದು.
ಎ ಬಿ ಎಸ್ ಪ್ರಕಟಿಸಿರುವ ಅಂಕಿಅಂಶಗಳ ಪ್ರಕಾರ, ಇತ್ತೀಚಿಗೆ ಆಗಮಿಸಿದ ವಲಸಿಗರ ಹಾಗೂ ಹಂಗಾಮಿ ನಿವಾಸಿಗಳ ನಿರುದ್ಯೋಗ ಪ್ರಮಾಣ ಶೇ ೭.೪ ರಷ್ಟಿದ್ದರೇ, ಸ್ಥಳೀಯರಾಗಿ ಹುಟ್ಟಿದವರಲ್ಲಿ ನಿರುದ್ಯೋಗ ಪ್ರಮಾಣ ಶೇ ೫. ರಷ್ಟಿದೆ. ವಿವರಗಳಿಗೆ ಅಂಕಣ ಆಲಿಸಿರಿ .....
ಬೆಂಗಳೂರಿನಿಂದ  ಡಿ. ಗರುಡ್ ನೀಡಿರುವ    ೧೬ / ೧೦ / ೨೦೧೭ ಕ್ಕೆ ಅಂತ್ಯಗೊಂಡ ವಾರದ  ಭಾರತದಲ್ಲಿನ  ಆಗು ಹೋಗುಗಳ ಸಂವಾದೀಯ ವಿವರಣೆ 
ಈ ವಾರದ 'ವಾರದಿಂದ ವಾರಕ್ಕೆ' ಸಂಚಿಕೆಯಲ್ಲಿ ಚಂದ್ರಶೇಖರ ದೇವುಡು ಕೆಳಕಂಡ ಸುದ್ದಿಗಳ ಬಗ್ಗೆ ಬೆಂಗಳೂರಿನಲ್ಲಿರುವ ಡಿ. ಗರುಡ್ ಜತೆ ಮಾತನಾಡಿದ್ದಾರೆ : ೧. ಮಳೆಯಿಂದ ಜನರು ಸಾಯುತ್ತಿದ್ದರೆ, ಶಾಸಕರಿಗೆ ಚಿನ್ನದ ಬಿಸ್ಕೆಟ್ !೨. ಗುರುದಾಸ್ ಪುರದಲ್ಲಿ ಬಿ ಜೆ ಪಿ ಗೆ ಮುಖಭಂಗ ;೩. ಗುಜರಾತ್ ಮತ್ತು ಹಿಮಾಚಲ...
 ಕರ್ನಾಟಕ ಕಲಾಶ್ರೀ ಡಾ. ಟಿ ಎಸ್ ಸತ್ಯವತಿಯವರು ತಮ್ಮ ಕಲಾ ಜೀವನದಲ್ಲಿ ಅಸಂಖ್ಯಾತ ಪ್ರಶಸ್ತಿಗಳನ್ನು ಪಡೆದಿರುವುದಲ್ಲದೇ, ಅವರು ಸಂಸ್ಕೃತ ವಿದ್ವಾಂಸರು ಕೂಡ. ಅವರು ಪ್ರಸ್ತುತದಲ್ಲಿ ಆಸ್ಟ್ರೇಲಿಯಾ ಪ್ರವಾಸ ಮಾಡುತ್ತಿದ್ದಾರೆ. ಸಿಡ್ನಿಯಲ್ಲಿ ಅವರು ಸಾಹಿತ್ಯ ದಿಗ್ಗಜ ದಿವಂಗತ ಪು ತಿ ನ ಅವರ...
ಡಾ ಟಿ ಎಸ್ ಸತ್ಯವತಿ ಅವರ ಸಿಡ್ನಿ ಪ್ರವಾಸದ ವೇಳೆಯಲ್ಲಿ, ಎಸ್ ಬಿ ಎಸ್ ರೇಡಿಯೋದ ವೀಣಾ ಸುದರ್ಶನ್ ಮಹಾ ಕಲಾವಿದೆಯ ಸಂದರ್ಶನ ಮಾಡಿದರು. ಸಂದರ್ಶನದಲ್ಲಿ ಡಾ ಸತ್ಯವತಿಯವರು ತಮ್ಮ ಸಂಗೀತ ಜೀವನದ ಆರಂಭ, ಸಾಧನೆಗಳ ಬಗ್ಗೆ ಮಾತನಾಡಿ, ಕರ್ನಾಟಕ ಸಂಗೀತದ ಭವಿಷ್ಯದ ಬಗ್ಗೆ ಕಳಕಳಿ ತೋರಿಸಿದ್ದಾರೆ. ವಿವರಗಳಿಗೆ...
ನಮ್ಮ ದಿನನಿತ್ಯದ ಜೀವನದಲ್ಲಿ, ಅಂತರ್ಜಾಲದ ಅಸ್ತಿತ್ವವು ಇಂದಿಗಿಂತ ಎಂದು ಉತ್ತಮವಾಗಿರಲಿಲ್ಲ. ಅಂತರ್ಜಾಲದ ಮೂಲಕ ನಾವು ಕೆಲಸ ಮಾಡುತ್ತೇವೆ, ವಸ್ತುಗಳನ್ನು ಖರೀದಿಸುತ್ತೇವೆ, ಆಟಗಳನ್ನಾಡುತ್ತೇವೆ ಮತ್ತು ನಮ್ಮ ಕುಟುಂಬದ ಸದಸ್ಯರೊಡನೆ ಹಾಗೂ ಮಿತ್ರರ ಜತೆ ಮಾತನಾಡುತ್ತೇವೆ. ಆದರೆ, ಎಂದಿಗಿಂತಲೂ ಹೆಚ್ಚಾಗಿ,...
ಆಸ್ಟ್ರೇಲಿಯಾದಲ್ಲಿ ಅಂತರ್ಜಾಲ ಕ್ಷೇತ್ರದಲ್ಲಿನ ಅಪರಾಧಗಳ ಬಗ್ಗೆ ಹೊರಬರುತ್ತಿರುವ ವರದಿಗಳಲ್ಲಿ ಏರಿಕೆಯಾಗಿದೆ. ದಿ ಆಸ್ಟ್ರೇಲಿಯನ್ ಕಾಂಪಿಟಿಶನ್ ಅಂಡ್ ಕನ್ಸ್ಯುಮರ್ ಕಮಿಷನ್ ನ ವಾರ್ಷಿಕ ವರದಿ 'ಟಾರ್ಗೆಟಿಂಗ್ ಸ್ಕಾಮ್ಸ್' ೨೦೧೬ ರಲ್ಲಿ ಹಗರಣಗಳು ವರದಿಯಾಗುತ್ತಿರುವುದರಲ್ಲಿ ಶೇ.೪೭ರಷ್ಟು ಏರಿಕೆಯಾಗಿದೆ,...
ಬೆಂಗಳೂರಿನಿಂದ  ಡಿ. ಗರುಡ್ ನೀಡಿರುವ    ೯ / ೧೦ / ೨೦೧೭ ಕ್ಕೆ ಅಂತ್ಯಗೊಂಡ ವಾರದ  ಭಾರತದಲ್ಲಿನ  ಆಗು ಹೋಗುಗಳ ಸಂವಾದೀಯ ವಿವರಣೆ 
ಈ ವಾರದ 'ವಾರದಿಂದ ವಾರಕ್ಕೆ' ಸಂಚಿಕೆಯಲ್ಲಿ ಚಂದ್ರಶೇಖರ ದೇವುಡು ಕೆಳಕಂಡ ಸುದ್ದಿಗಳ ಬಗ್ಗೆ ಬೆಂಗಳೂರಿನಲ್ಲಿರುವ ಡಿ. ಗರುಡ್ ಜತೆ ಮಾತನಾಡಿದ್ದಾರೆ ; ೧. ಗೋಧ್ರಾ ಹತ್ಯಾಕಾಂಡದ ಅಪರಾಧಿಗಳಿಗೆ ಗಲ್ಲುಶಿಕ್ಷೆ ಬದಲು ಜೀವಾವಧಿ ಶಿಕ್ಷೆ ;೨. ಬಿ ಜೆ ಪಿ ಅಧ್ಯಕ್ಷ ಅಮಿತ್ ಷಾ ಅವರ ಮಗ ಜಯ್ ಷಾ ಉದ್ಯಮದ ಅಕ್ರಮ...
ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಸುರಮಣಿ ದತ್ತಾತ್ರೇಯ ವೇಲಂಕರ್ ರವರು ಬೆಳ್ಳಾವೆ ನಾಗಶಯನ ಅವರೊಡನೆ ತಮ್ಮ ಸಂಗೀತ ಪಯಣ ಮತ್ತು ಕಥಾ ಕೀರ್ತನದ ಬಗ್ಗೆ ಮಾತನಾಡಿದ್ದಾರೆ.
ಪ್ರತಿ ವರ್ಷ ಸುಮಾರು ನಲವತ್ತು ಲಕ್ಷ ಆಸ್ಟ್ರೇಲಿಯನ್ನರು ಮಾನಸಿಕ ಅಸ್ವಸ್ಥತೆಗೆ ಒಳಗಾಗುತ್ತಿದ್ದಾರೆ.
ನಾವಿರುವ ಸಮಾಜವನ್ನು ರೂಪಿಸುವಲ್ಲಿ ಎಲ್ಲ ಆಸ್ಟ್ರೇಲಿಯಾ ನಾಗರಿಕರಿಗೆ ಸಕ್ರಿಯವಾಗಿ  ಭಾಗವಹಿಸುವ  ಹಕ್ಕಿದೆ.
ಎಸ್.ಬಿ.ಎಸ್. ರೇಡಿಯೋ ಸೇವೆಯ ಪುನರವಲೋಕನದ ಫಲಿತಾಂಶ  ಮತ್ತು ಸೆನ್ಸಸ್ ೨೦೧೬ರ ಅಂಕಿ ಅಂಶ ಮಾಹಿತಿಯ ಆಧಾರದ ಮೇಲೆ ೨೦೧೭ರ ಅಂತ್ಯದ ಹೊತ್ತಿಗೆ ಯಾವ ಭಾಷೆಗಳ ಸೇವೆ ಇರುವವೆಂದು ಎಸ್.ಬಿ.ಎಸ್. ಘೋಷಿಸಿದೆ.   
ಬೆಂಗಳೂರಿನಿಂದ  ಡಿ. ಗರುಡ್ ನೀಡಿರುವ  25/09/2017ರ ವಾರಾಂತ್ಯದ  ಭಾರತದ  ಆಗು ಹೋಗುಗಳ ಸಂವಾದೀಯ ವಿವರಣೆ
ಆಸ್ಟ್ರೇಲಿಯಾದಲ್ಲಿ ನೆಲೆಯೂರಿದ ಜನರಿಗೆ ಅರ್ಹತೆಯುಳ್ಳ ಅರ್ಥ ನಿರೂಪಣಕಾರರ ಸೇವೆ ಬಹಳ ದೊಡ್ಡ ನೆರವಾಗುತ್ತದೆ.  
ಅವರು ವ್ಯಾಪಕವಾಗಿ ಅಧಿಕೃತ ದಾಖಲೆಗಳನ್ನು ಅನುವಾದ ಮಾಡುವುದರಿಂದ ಹಿಡಿದು ವೈದ್ಯರಲ್ಲಿಗೆ ಜೊತೆಗೆ ಬಂದು ನಿಮ್ಮ ಭಾಷೆಯಲ್ಲೇ ಏನು ನಡೆಯುತ್ತಿದೆ ಎಂದು ಅರ್ಥಮಾಡಿಸುತ್ತಾರೆ. ನೀವು ಆ ಸೇವೆಗಳನ್ನು ಹಣ ಕೊಟ್ಟು ಪಡೆದಿರಬಹುದು. ಆದರೆ ಅದು ಉಚಿತವಾಗಿ ದೊರೆಯುತ್ತದೆ ಎಂದು ನಿಮಗೆ ತಿಳಿದಿತ್ತೆ?  
ಯಾರನ್ನು ಸ್ಥೂಲಕಾಯರೆಂದು ಪರಿಗಣಿಸಲಾಗುತ್ತದೆ, ಸ್ಥೂಲಕಾಯಕ್ಕೆ ಕಾರಣಗಳೇನು ಹಾಗೂ ಅದರಿಂದಾಗುವ ಅಪಾಯಗಳೇನು ಎಂದು ಎಂಡೋಕ್ರೈನೊಲೊಜಿಸ್ಟ್ ಡಾ.ಶೈಲಜಾ ತಿವಾರಿಯವರು ವಿವರಿಸುತ್ತಾರೆ.  
ಆರೋಗ್ಯಕರ ಆಹಾರ ಹಾಗೂ ನಿಯಮಿತ ವ್ಯಾಯಾಮದಿಂದ ಆರೋಗ್ಯಕರ ಜೀವನಶೈಲಿ ನಡೆಸುವ ರೀತಿಯನ್ನು ಅವರು ಸೂಚಿಸುತ್ತಾರೆ.    
ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ 18/09/2017 ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ  
ಈ ವಾರದ 'ವಾರದಿಂದ ವಾರಕ್ಕೆ' ಸಂಚಿಕೆಯಲ್ಲಿ ಬೆಳ್ಳಾವೆ ನಾಗಶಯನ ಕೆಳಕಂಡ ಸುದ್ದಿಗಳ ಬಗ್ಗೆ ಬೆಂಗಳೂರಿನಲ್ಲಿರುವ ಡಿ. ಗರುಡ್ ಜತೆ ಮಾತನಾಡಿದ್ದಾರೆ ; ೧. ಜಪಾನ್ ಪ್ರಧಾನಿ ಶಿಂಜೋ ಅಬೆಯ ಭಾರತ ಪ್ರವಾಸ ೨ ಸರ್ದಾರ್ ಸರೋವರ್ ಅಣೆಕಟ್ಟು ಲೋಕಾರ್ಪಣೆ ೩ ಮೈಸೂರು ದಸರಾ ಭರದ ಸಿದ್ಧತೆ ಮತ್ತು ...
ಪ್ರತಿ ಆರ್ಥಿಕ ವರ್ಷ ಅಂತ್ಯವಾದ ನಂತರ, ಜುಲೈ ಒಂದರಿಂದ `ತೆರಿಗೆ ಕಾಲ'. ಆಸ್ಟ್ರೇಲಿಯನ್ನರು ತೆರಿಗೆಯ ವಿವರವನ್ನು ಸಂಪೂರ್ಣಗೊಳಿಸುವ ಅವಧಿ. 
ತೆರಬೇಕಾದ ತೆರಿಗೆ ಮೊತ್ತ ಸರಿಯಾಗಿದೇಯೇ, ಕಳೆಯಬೇಕಾದ ವೆಚ್ಚವನ್ನು ಕಳೆದಾಗಿದೆಯೇ ಎಂದು ಪರೀಕ್ಷಿಸುವ ಕಾಲ. ತೆರಿಗೆ ಪಾವತಿಸಿದ ನಂತರ, ಹಿಂತಿರುಗಿ ಬರಬೇಕಿರುವ ಅಧಿಕ ಮೊತ್ತವನ್ನು ನಿರೀಕ್ಷಿಸುವ ಕಾಲವೂ ಹೌದು.