ಹಲವು ಕಲೆಗಳ ಪ್ರತಿಭಾವಂತ : ಡಾ ಸಂಜಯ್ ಶಾಂತಾರಾಮ್

Dr Sanjay Shantaram

Dr Sanjay Shantaram Source: Dr Sanjay Shantaram

ಒಂದು ಕಲೆಯಲ್ಲಿ ಉನ್ನತ ಮಟ್ಟ ಸಾಧಿಸುವುದು ಬಹು ಕಠಿಣವಾದ ಕಾರ್ಯವಾದರೂ, ಹಲವಾರು ಕಲೆಗಳಲ್ಲಿ ಉನ್ನತ ಮಟ್ಟ ಸಾಧಿಸಿರುವ ವ್ಯಕ್ತಿ ಒಬ್ಬರು ಇದ್ದಾರೆ. ಬೆಂಗಳೂರಿನ ಡಾ ಸಂಜಯ್ ಶಾಂತಾರಾಮ್ ಆ ವ್ಯಕ್ತಿಯಾಗಿದ್ದು, ನೃತ್ಯ, ಅಭಿನಯ ಮತ್ತು ಸಂಗೀತ ಕಲೆಗಳಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ.


ಡಾ ಸಂಜಯ್ ಶಾಂತಾರಾಮ್, ಬಾಲ ಪ್ರತಿಭಾವಂತರಾಗಿದ್ದು , ಚಿತ್ರ ಮತ್ತು ಟಿ ವಿ ಧಾರಾವಾಹಿಗಳಲ್ಲಿ ತಮ್ಮ ಕಲಾ ಜೀವನ ಆರಂಭಿಸಿ, ಇಂದು ನೃತ್ಯಪಟುವಾಗಿ, ನಟನಾಗಿ ಹಾಗೂ ಗಾಯಕನಾಗಿ ಅಸಾಧಾರಣ ಯಶಸ್ಸು ಗಳಿಸಿದ್ದಾರೆ. ದಂತವೈದ್ಯರಾಗುವ ಬಯಕೆಯಿಂದ ದಂತವೈದ್ಯಶಾಸ್ತ್ರದಲ್ಲಿ ಪದವೀಧರರಾದರೂ ಬಹುಕಾಲ ರಂಗದ ಮೋಹದಿಂದ ದೂರ ಉಳಿಯಲಾಗದೆ ದಂತವೈದ್ಯಕ್ಕೆ ವಿದಾಯ ಹೇಳಿದವರು ಇವರು. ಭರತನಾಟ್ಯ, ಕೂಚಿಪುಡಿ ನೃತ್ಯಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಂಜಯ್ ಶಾಂತರಾಮ್ ತಮ್ಮದೇ ಆದ ನೃತ್ಯ ತಂಡವೊಂದನ್ನು ಕಟ್ಟಿ, ವಿಶ್ವದ ಮೂಲೆಮೂಲೆಗೂ ತಮ್ಮ ತಂಡದ ಕಲಾ ಪ್ರದರ್ಶನವನ್ನು ಒಯ್ದಿದ್ದಾರೆ. ಅವರು ಅವರ ತಂಡದೊಂದಿಗೆ ಬರುವ ಏಪ್ರಿಲ್ ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾರೆ. ಅವರ ಆಸ್ಟ್ರೇಲಿಯಾ ಪ್ರವಾಸದ ಮುನ್ನ ಚಂದ್ರಶೇಖರ ದೇವುಡು ಅವರ ಜತೆ ಅವರ ಕಲಾ ಜೀವನದ ಬಗ್ಗೆ ಮಾತನಾಡಿದ್ದಾರೆ....



ವಿವರಗಳಿಗೆ ಅಂಕಣ ಆಲಿಸಿರಿ






Share