ಸಮುದಾಯಗಳಲ್ಲಿ ಪಾರ್ಶ್ವವಾಯು ಬಗ್ಗೆ ಜಾಗೃತಿ ಉಂಟು ಮಾಡಲು ಸ್ಟ್ರೋಕ್ ಫೌಂಡೇಷನ್ ಸೆಪ್ಟೆಂಬರ್ ೧೨ ರಿಂದ ೧೮ ರ ವರೆಗೆ ರಾಷ್ತ್ರೀಯ ಪಾರ್ಶ್ವವಾಯು ಸಪ್ತಾಹವನ್ನು ಆಚರಿಸುತ್ತಿದೆ. ಅಂಕಿ, ಅಂಶಗಳ ಪ್ರಕಾರ ೬ ಜನರಲ್ಲಿ ಒಬ್ಬರು ತಮ್ಮ ಜೀವಮಾನದಲ್ಲಿ ಒಮ್ಮೆ ಪಾರ್ಶ್ವವಾಯುವಿಗೆ ತುತ್ತಾಗುತ್ತಾರೆ, ಅಲ್ಲದೇ ಪ್ರತಿ ೧೦ ನಿಮಿಷಕ್ಕೊಮ್ಮೆ ಒಬ್ಬರಿಗೆ ಪಾರ್ಶ್ವವಾಯು ತಗುಲುತ್ತದೆ.
ಪಾರ್ಶ್ವವಾಯು ಆಸ್ಟ್ರೇಲಿಯಾದ ಬೃಹತ್ ಮಾರಕ ಖಾಯಿಲೆಗಳಲ್ಲಿ ಒಂದು ಅಲ್ಲದೇ ಅಂಗಗಳ ಉಪಯೋಗದಿಂದ ವಂಚಿತರಾಗುವಂತೆ ಮಾಡುತ್ತದೆ. ಸ್ತನಗಳ ಕ್ಯಾನ್ಸರ್ ಗಿಂತ ಪಾರ್ಶ್ವವಾಯುವಿನಿಂದ ಸಾಯುವ ಹೆಂಗಸರ ಸಂಖ್ಯೆಯೇ ಜಾಸ್ತಿ; ಅದೇ ತರಹ ಪ್ರೊಸ್ಟೇಟ್ ಕ್ಯಾನ್ಸರ್ ಗಿಂತ ಪಾರ್ಶ್ವವಾಯುವಿನಿಂದ ಸಾಯುವ ಗಂಡಸರ ಸಂಖ್ಯೆಯೇ ಜಾಸ್ತಿ.
ಎಸ್ ಬಿ ಎಸ್ ರೇಡಿಯೋ ನರಗಳ ತಜ್ಞೆ ಡಾ. ಸುಮನಾ ಗೋಪಿನಾಥ್ ಪಾರ್ಶ್ವವಾಯುವಿನ ಕಾರಣ, ತಡೆಗಟ್ಟುವಿಕೆಗಳ ಬಗ್ಗೆ ಮತ್ತು ಚಿಕಿತ್ಸಾ ವಿಧಾನಗಳ ಬಗ್ಗೆ ಮನಾತನಾಡಿದೆ....
ವಿವರಗಳಿಗೆ ಅಂಕಣ ಆಲಿಸಿರಿ .........
Share




