ನೀವು ಆಸ್ಟ್ರೇಲಿಯಾದಲ್ಲಿ ಉದ್ಯೋಗಿಗಳಾಗಿದ್ದಲ್ಲಿ, ನಿಮ್ಮ ಉದ್ಯೋಗದ ಮಾಲೀಕರು ನೀವು ಗಳಿಸುವ ವೇತನದ ಒಂದು ನಿರ್ದಿಷ್ಟ ಭಾಗವನ್ನು ಒಂದು ನಿವೃತ್ತಿ ವೇತನ ನಿಧಿಗೆ ಸಂದಾಯಿಸಬೇಕು. ಆ ಸಂದಾಯ ಮತ್ತೊಂದು ತೆರಿಗೆ ಎಂದು ನಿಮಗೆ ಅನ್ನಿಸಬಹುದು ಆದರೆ ಅದು ತೆರಿಗೆಯಲ್ಲ. ಹಾಗಾದರೆ ನಿವೃತ್ತಿ ವೇತನದ ಉದ್ದೇಶವೇನು ಮತ್ತು ಅದು ಹೇಗೆ ನಿಮಗೆ ಸೌಲಭ್ಯವಾಗುತ್ತದೆ?
ಹಾಗಾದರೆ ನಿವೃತ್ತಿ ವೇತನದ ಉದ್ದೇಶವೇನು ಮತ್ತು ಅದು ಹೇಗೆ ನಿಮಗೆ ಸೌಲಭ್ಯವಾಗುತ್ತದೆ?
ನಿವೃತ್ತಿ ವೇತನ ನಿಧಿ, ನೀವು ವೇತನಸಹಿತದ ಉದ್ಯೋಗದಿಂದ ನಿವೃತ್ತಿಯಾದ ನಂತರ ನಿಮಗೆ ಆದಾಯ ನೀಡಲು ಕಲ್ಪಿಸಿರುವ ದೀರ್ಘಕಾಲದ ಉಳಿತಾಯದ ಯೋಜನೆ. ನೀವು ಯೌವ್ವನಸ್ಥರಾಗಿದ್ದಾಗ ನಿವೃತ್ತಿ ತುಂಬಾ ದೂರದಲ್ಲಿದೆ ಯೆನ್ದೆನಿಸಬಹುದು. ಆದರೆ ದಿ ಆಸ್ಟ್ರೇಲಿಯನ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಆಂಡ್ ವೆಲ್ಫ಼ೇರ್ ಸಂಸ್ಥೆ ಪ್ರಕಾರ ಆಸ್ಟ್ರೇಲಿಯಾದಲ್ಲಿ ಜೀವಿತ ಕಾಲಮಾನ ೮೨ ವರ್ಷಗಳು ಎಂಬುದನ್ನು ಗಮನದಲ್ಲಿರಿಸಿಕೊಳ್ಳಬೇಕು. ಅಂದರೆ ನೀವು ೧೫ ರಿಂದ ೨೦ ವರ್ಷಗಳ ಸುಖವಾದ ನಿವೃತ್ತಿ ಜೀವನ ನಡೆಸಲು ಉದ್ಯೋಗದಲ್ಲಿದ್ದಾಗಲೇ ಉಳಿತಾಯ ಮಾಡಬೇಕು.
ವಿವರಗಳಿಗೆ ಅಂಕಣ ಆಲಿಸಿರಿ ........
Share




