ಕನ್ನಡ ನಟ, ನಿರ್ದೇಶಕ ಮತ್ತು ನಿರ್ಮಾಪಕ ಎಸ್ ಶಿವರಾಮ್ ಜತೆ ಒಂದು ಬಿಚ್ಚು ಮನಸ್ಸಿನ ಮಾತು

S.Shivaram, Actor, Director and Producer

S.Shivaram, Actor, Director and Producer Source: Chiloka.com

ಕನ್ನಡ ಚಿತ್ರ ರಂಗದ ಹಿರಿಯ ಶಿವರಾಮ್ ಅವರಿಗೆ ಹಲವಾರು ಸಾವಿರ ಹೊತ್ತಿಗೆಗಳನ್ನು ಹೊಂದಿರುವ ಅವರ ಗ್ರಂಥಾಲಯದ ಬಗ್ಗೆ ಭಾರಿ ಹೆಮ್ಮೆ. ಸ್ವಂತ ಶ್ರಮದಿಂದ ಸಂಗ್ರಹಿಸಿರುವ ಪುಸ್ತಕಗಳನ್ನು ಅವರು ಅಗತ್ಯವಿರುವವರಿಗಾಗಿ ಮುಕ್ತವಾಗಿ ಇಟ್ಟಿದ್ದಾರೆ. ತಮ್ಮ ಗ್ರಂಥಾಲಯದ ಬಗ್ಗೆ ಬಹು ಪ್ರೇಮದಿಂದ ಮಾತನಾಡಿದ ಶಿವರಾಮ್ ನಿಧಾನವಾಗಿ ತಮ್ಮ ಜೀವನದ ಬಗ್ಗೆ - ನಟನಾಗಿ,ನಿರ್ದೇಶಕನಾಗಿ ಮತ್ತು ನಿರ್ಮಾಪಕನಾಗಿ ಕಳೆದ ಕಾಲವನ್ನು ಮೆಲುಕು ಹಾಕಿದ್ದಾರೆ. ತಮ್ಮ ಕಲಾ ಜೀವನದ ಉದ್ದಕ್ಕೂ ಉದಯೋನ್ಮುಖ ಕಲಾವಿದರಿಗೆ ಮಾರ್ಗದರ್ಶಿಯಾಗಿ ಅನಿಶ್ಚಿತವಾದ ಚಿತ್ರ ರಂಗದಲ್ಲಿ ದಾರಿ ತೋರಿದ್ದಾರೆ.


ನಾಟಕ ರಂಗ ಮತ್ತು ಚಿತ್ರ ರಂಗದಲ್ಲಿ ಅಸಾಧಾರಣ ಸಾಧನೆ ಮಾಡಿರುವ ಶಿವರಾಮ್ ಎಸ್ ಬಿ ಎಸ್ ರೇಡಿಯೋದ ನಾಗಶಯನ ಬೆಳ್ಳಾವೆಯೊಂದಿಗೆ ಮಾತನಾಡಿ ಕನ್ನಡ ಚಲನ ಚಿತ್ರ ರಂಗದಲ್ಲಿನ ತಮ್ಮ ಪ್ರಯಾಣದ ಹಾದಿಯನ್ನು ನೆನಪಿಸಿಕೊಂಡಿದ್ದಾರೆ.....


Share